ಜವರೇಗೌಡ, ದೇ -
1918-. ದೇಜಗೌ ಎಂಬ ಸಂಕ್ಷಿಪ್ತನಾಮ ದಿಂದ ಪ್ರಸಿದ್ಧರು. ಕನ್ನಡನಾಡಿನ ಹೆಸರಾಂತ ಗದ್ಯ ಲೇಖಕರಲ್ಲೊಬ್ಬರು. ಕನ್ನಡಕ್ಕೆ ಸೂಕ್ತ ಸ್ಥಾನಮಾನವನ್ನು ದೊರಕಿಸಿಕೊಡುವ ಹೋರಾಟದಲ್ಲಿ ಇವರು ವಹಿಸಿದ ಪಾತ್ರ ಹಿರಿದು. ಕನ್ನಡ ಮಾಧ್ಯಮವಾಗಬೇಕು, ಕನ್ನಡ ಆಡಳಿತ ಭಾಷೆಯಾಗಬೇಕು, ಕನ್ನಡನಾಡಿನಲ್ಲಿ ಕನ್ನಡವೇ ಅಗ್ರಪೀಠದಲ್ಲಿ ಪ್ರತಿಷಾವಿಪಿತವಾಗಬೇಕು; ಕನ್ನಡ ಸಂಸ್ಕøತಿ, ಇತಿಹಾಸ, ಕಾವ್ಯ ಪರಂಪರೆಯಿಂದ ಕನ್ನಡಿಗರು ಚೈತನ್ಯವನ್ನು ತುಂಬಿಕೊಂಡು ರಾಷ್ಟ್ರದಲ್ಲಿ ತಲೆಯೆತ್ತಿ ಮೆರೆಯಬೇಕು, ಕನ್ನಡಕ್ಕೆ ವಿಶ್ವಮಾನ್ಯತೆ ದೊರೆಯಬೇಕು ಎಂಬ ಹಂಬಲವನ್ನು ತುಂಬಿಕೊಂಡು ಅವಿರತವಾಗಿ ಶ್ರಮಿಸಿದ ಕೀರ್ತಿ ಇವರದು. ಕನ್ನಡ ಮತ್ತು ದೇಜಗೌ ಈ ಎರಡರ ಸಂಬಂಧ ನಾಡಿನಾದ್ಯಂತ ಜನಜನಿತವಾಗಿದೆ.

	ಇವರು ಬೆಂಗಳೂರು ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಚಕ್ಕೆರೆ ಗ್ರಾಮದ ಬಡ ರೈತ ಕುಟುಂಬ ಒಂದರಲ್ಲಿ 1918 ಜುಲೈ 6ರಂದು ಜನಿಸಿದರು. ಇವರ ತಂದೆ ದೇವೇಗೌಡರು, ತಾಯಿ ಚೆನ್ನಮ್ಮ. ಬಡತನದಲ್ಲಿದ್ದರೂ ನಿಷ್ಠೆಯ, ಪ್ರಾಮಾಣಿಕತೆಯ ಜೀವನವನ್ನು ನಡೆಸಿದವರು. ಊರಿನ ಧನಿಕರ ವಿರೋಧವಿದ್ದರೂ ಮಗನನ್ನು ಓದಿಸಲೇಬೇಕೆಂಬ bsÀಲವನ್ನು ತುಂಬಿಕೊಂಡವರು. ತಂದೆಯ ಸದ್ಗುಣಗಳನ್ನೆಲ್ಲ ತುಂಬಿಕೊಂಡು ಬೆಳೆದ ಜವರೇಗೌಡರು ಕುವೆಂಪು ಅವರ ಶಿಷ್ಯರಾಗಿ, ಅವರ ಮಾರ್ಗದರ್ಶನದಲ್ಲಿ ಕನ್ನಡದಲ್ಲಿ ಎಂ.ಎ. ಪದವಿ ಪಡೆದರು. ಸ್ವಲ್ಪ ಕಾಲ ಅಠಾರ ಕಚೇರಿಯಲ್ಲಿ ಗುಮಾಸ್ತ ರಾಗಿ ಕೆಲಸ ಮಾಡಿದರು. ಒಳ್ಳೆಯ ರೈತನಾಗಬೇಕೆಂಬ ಹಂಬಲವಿದ್ದ ಇವರು ಕನ್ನಡದ ಕರೆಗೆ ಓಗೊಟ್ಟು ಗುಮಾಸ್ತನ ಕೆಲಸವನ್ನು ತೊರೆದು, 1946ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇರಿದರು. ಅನಂತರ ಪ್ರಕಟಣ ಶಾಖೆಯ ಕಾರ್ಯದರ್ಶಿಯಾದರು (1954). ಹಗಲಿರುಳೂ ದುಡಿದು ಪ್ರಕಟಣಶಾಖೆಯನ್ನು ವ್ಯಾಪಕವಾಗಿ ಬೆಳೆಸಿದರು. 1955ರಲ್ಲಿ ಕನ್ನಡದ ಉಪ-ಪ್ರಾಧ್ಯಾಪಕರಾದರು. ಕುವೆಂಪು ಅವರು ಮೈಸೂರು ವಿಶ್ವವಿದ್ಯಾನಿಲಯಕ್ಕೆ ಉಪಕುಲಪತಿಗಳಾದಾಗ ಇವರ ಕಾರ್ಯದಕ್ಷತೆಯನ್ನು ಗಮನಿಸಿ ಇವರನ್ನು 1957ರಲ್ಲಿ ವಿಶ್ವವಿದ್ಯಾನಿಲಯದ ಪ್ರಪ್ರಥಮ ಪರೀP್ಷÁ ನಿಯಂತ್ರಣಾದಿsಕಾರಿಯನ್ನಾಗಿ ನೇಮಿಸಿದರು. ಇವರು ಪರೀP್ಷÁ ವಿಭಾಗಕ್ಕೆ ಹೊಸ ಜೀವವನ್ನು ತುಂಬಿ ಅನೇಕ ಹೊಸ ಸುಧಾರಣೆಗಳನ್ನು ತಂದರು.

	1960ರಲ್ಲಿ ಇವರು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಪ್ರಿನ್ಸಿಪಾಲರಾಗಿ ನೇಮಿಸಲ್ಪಟ್ಟರು. ಅದೇ ವರ್ಷ ಮಾನಸಗಂಗೋತ್ರಿಯ ಕನ್ನಡ ಇಲಾಖೆಗೆ ಕನ್ನಡ ರೀಡರ್ ಆಗಿ ಆಯ್ಕೆಯಾದರು. ಪ್ರಾಧ್ಯಾಪಕ ತೀನಂಶ್ರೀ ಅವರೊಡನೆ ಇಲಾಖೆಯ ಉತ್ಕರ್ಷಕ್ಕಾಗಿ ದುಡಿದುದರ ಜೊತೆಗೆ ಮಾನಸಗಂಗೋತ್ರಿಯ ಬೆಳೆವಣಿಗೆಗೂ ಮೂಲಪ್ರೇರಕರಾದರು. ಮಹಾರಾಜ ಕಾಲೇಜಿನಿಂದ ಆಗಿನ್ನೂ ಬರಡಾಗಿದ್ದ ಗಂಗೋತ್ರಿಯ ದಿಬ್ಬಕ್ಕೆ ಕೆಲವು ಇಲಾಖೆಗಳನ್ನು ವರ್ಗಾಯಿಸಲು ಇವರು ಹೋರಾಟವನ್ನೇ ನಡೆಸಿದರು. ಇದರಿಂದಾಗಿ ಅಲ್ಲಿಗೆ ಕನ್ನಡ ಇಲಾಖೆ ಮೊದಲು ಕಾಲಿಟ್ಟು, ಇತರರೂ ಅತ್ತ ಹೊರಳಲು ಪ್ರೇರಕವಾಯಿತು.

	1962ರಲ್ಲಿ ಇವರು ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕರೂ ಇಲಾಖಾ ಮುಖ್ಯರೂ ಆದರು. ಇಲಾಖೆಯನ್ನು ವ್ಯಾಪಕವಾಗಿ ಬೆಳೆಸುವ, ಕನ್ನಡದ ಅಬಿsವೃದ್ಧಿಗಾಗಿ ಯೋಜನೆಗಳನ್ನು ಸಿದ್ಧಗೊಳಿಸುವ ಗುರುತರ ಹೊಣೆಗಾರಿಕೆ ಇವರ ಪಾಲಿಗೆ ಬಂತು. ತಾವು ಪ್ರಾಧ್ಯಾಪಕರಾದ ಮೇಲೆ ತಮ್ಮ ಪ್ರಿಯ ವಿಷಯವಾದ ಜಾನಪದವನ್ನು ಸ್ನಾತಕೋತ್ತರ ತರಗತಿಗಳ ಐಚ್ಫಿಕ ವಿಷಯವಾಗಿ ಸೇರಿಸಿ ಕ್ರಾಂತಿಕಾರಕ ಹೆಜ್ಜೆಯನ್ನಿಟ್ಟರು. ವ್ಯಾಕರಣ, ಭಾಷಾವಿe್ಞÁನ, ಜಾನಪದಗಳಲ್ಲಿ ವಿಶೇಷ ತಜ್ಞತೆಯನ್ನು ಪಡೆದುಕೊಂಡಿದ್ದ ಇವರು ಉತ್ತಮ ಪ್ರಾಧ್ಯಾಪಕರಾಗಿ ಬಹುಬೇಗ ಕೀರ್ತಿಗಳಿಸಿದರು. ಇವರ ಕಾಲದಲ್ಲಿ ಕನ್ನಡ ಇಲಾಖೆ ಒಂದು ಸಂಸ್ಥೆಯಾಗಿ ರೂಪುಗೊಂಡಿತು. ಕನ್ನಡ ಅಧ್ಯಯನ ಸಂಸ್ಥೆಯ ಕನಸನ್ನು ಕಂಡು ಅದನ್ನು ಸ್ಥಾಪಿಸಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡಕ್ಕೆ ಮೊದಲ ಸ್ಥಾನವನ್ನು ದೊರಕಿಸಿಕೊಟ್ಟರು. ಆ ಸಂಸ್ಥೆಗೆ ಗಂಗೋತ್ರಿಯ ಹೃದಯಸ್ಥಾನದಲ್ಲಿ ಭವ್ಯಕಟ್ಟಡವನ್ನೂ ಒದಗಿಸಿ ಸಂಸ್ಥೆಯ ಪ್ರಥಮ ನಿರ್ದೇಶಕರಾದರು (1966). ಕನ್ನಡದ ಸರ್ವತೋಮುಖವಾದ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ಸಿದ್ಧಗೊಳಿಸಿ ಕನ್ನಡದ ಬಹುಮುಖ ಕಾರ್ಯಗಳು ಅಧ್ಯಯನ ಸಂಸ್ಥೆಯಲ್ಲಿ ನಡೆಯುವಂತೆ ಮಾಡಿದರು. ಸರ್ಕಾರಿ ಇಲಾಖೆಯಲ್ಲಿದ್ದ ಕನ್ನಡ ವಿಶ್ವಕೋಶದ ಯೋಜನೆಯನ್ನು ಮೈಸೂರು ವಿಶ್ವವಿದ್ಯಾನಿಲಯಕ್ಕೆ ದಕ್ಕಿಸಿಕೊಂಡು ಉತ್ತಮ ಕೆಲಸಗಾರರನ್ನು ಆರಿಸಿಕೊಂಡು ಆ ಕೆಲಸ ತ್ವರಿತಗತಿಯಿಂದ ಸಾಗುವಂತೆ ಚಾಲನೆ ನೀಡಿದರು. ನಮ್ಮ ಪರಂಪರಾನುಗತ ಸಂಸ್ಕøತಿಯ ವಿವಿಧ ಸ್ತರಗಳನ್ನು ಗುರುತಿಸುವ ಜಾನಪದ ವಸ್ತುಸಂಗ್ರಹಾಲಯದ ಕಲ್ಪನೆಯನ್ನು ಕಾರ್ಯಗತಗೊಳಿಸಿ ವಿಶ್ವವಿದ್ಯಾನಿಲಯದ ಮಟ್ಟದಲ್ಲಿ ದೊಡ್ಡ ವಸ್ತುಸಂಗ್ರಹಾಲಯವೊಂದು ಪ್ರಪ್ರಥಮವಾಗಿ ರೂಪುಗೊಳ್ಳಲು ಕಾರಣಕರ್ತರಾದರು. ಪ್ರಾಚ್ಯವಿದ್ಯಾಸಂಶೋಧನಾಲಯದ ಕನ್ನಡ ಸಂಪಾದನ ವಿಭಾಗವನ್ನು ಪ್ರತ್ಯೇಕಿಸಿ ಅದನ್ನು ಕನ್ನಡ ಅಧ್ಯಯನ ಸಂಸ್ಥೆಯ ತೆಕ್ಕೆಗೆ ತೆಗೆದುಕೊಂಡು ಪ್ರಾಚೀನ ಗ್ರಂಥಗಳು ಹೆಚ್ಚು ಹೆಚ್ಚಾಗಿ ಸಂಗ್ರಹಿತವಾಗಿ ಸಂಪಾದಿತವಾಗಿ ಹೊರಬರಲು ಕಾರಣರಾದರು. ಭಾಷಾಂತರ ಇಲಾಖೆಯ ಬಹುಮುಖ ಪ್ರಯೋಜನವನ್ನು ಕಂಡುಕೊಂಡು ಅದನ್ನು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಆರಂಭಿಸಿ ಆ ವಿಷಯಕ್ಕೆ ಒಂದು ಮಾನ್ಯತೆಯನ್ನು ತಂದುಕೊಟ್ಟರು. ಕನ್ನಡ ಸರ್ವಶಕ್ತವಾಗಿ ಬೆಳೆಯಲು ಅನ್ಯಭಾಷೆಯ ಕೃತಿಗಳು ಕನ್ನಡದಲ್ಲಿ ಬರಬೇಕು, ಪಠ್ಯಪುಸ್ತಕಗಳು ಹೇರಳವಾಗಿ ಪ್ರಕಟವಾಗಬೇಕು ಎಂಬ ದೂರದೃಷ್ಟಿಯಲ್ಲಿ ಭಾಷಾಂತರ ಮತ್ತು ಪಠ್ಯಪುಸ್ತಕ ವಿಭಾಗವನ್ನು ರೂಪಿಸಿದರು. ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆಯ ಕೊರತೆಯನ್ನು ಕಂಡುಕೊಂಡು ಹತ್ತು ಸಂಪುಟಗಳಲ್ಲಿ ಅದು ಪ್ರಕಟವಾಗುವ ಯೋಜನೆಯನ್ನೂ ರೂಪಿಸಿದರು. ಜಾನಪದ, ಭಾಷಾಂತರ ಮುಂತಾದ ವಿಷಯಗಳಲ್ಲಿ ಡಿಪೆÇ್ಲಮಾ ತರಗತಿಗಳನ್ನು ಆರಂಬಿsಸಿದರು. ಕನ್ನಡ ಉಪಭಾಷಾ ಪರಿವೀಕ್ಷಣೆಯನ್ನು ಕೈಗೊಂಡು ಹಾ.ಮಾ.ನಾಯಕರೊಡನೆ ಕ್ಷೇತ್ರರ್ಕಾಯವನ್ನು ನಾಡಿನ ನಾನಾ ಕಡೆಗಳಲ್ಲಿ ನಡೆಸಿದರು.

	ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಜಾನಪದ ಪರಿಷತ್ತು, ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಗಳಲ್ಲಿ ಹಲವು ಪ್ರಮುಖ ಪಾತ್ರವಹಿಸಿ ಗೌಡರು ದುಡಿದಿದ್ದಾರೆ. ಕನ್ನಡದ ಬೆಳೆವಣಿಗೆಗಾಗಿ ಇವರು ನಡೆಸಿದ ಪ್ರಯತ್ನಗಳೂ ರೂಪಿಸಿದ ಯೋಜನೆಗಳೂ ಇವರಿಗೆ ನಾಡಿನಾದ್ಯಂತ ಒಳ್ಳೆಯ ಕೀರ್ತಿಯನ್ನು ತಂದವು. ಇವರ ಸೇವೆಯನ್ನೂ ದಕ್ಷತೆಯನ್ನೂ ಪ್ರಾಮಾಣಿಕ ದುಡಿಮೆಯನ್ನೂ ಗಮನಿಸಿ ಕರ್ನಾಟಕ ಸರ್ಕಾರ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಇವರನ್ನು 1969ರಲ್ಲಿ ಕುಲಪತಿಯನ್ನಾಗಿ ನೇಮಿಸಿತು.ಇವರು ಕುಲಪತಿಯಾದ ಮೇಲೆ ವಿಶ್ವವಿದ್ಯಾನಿಲಯದ ಸರ್ವಪ್ರಗತಿಗೂ ಅಪಾರವಾಗಿ ಶ್ರಮಿಸಿದರು. ರಾಜ್ಯ ಸರ್ಕಾರ ವಿಶ್ವವಿದ್ಯಾನಿಲಯಗಳ ಧನಸಹಾಯ ಆಯೋಗ ಹಾಗೂ ಇತರ ಮೂಲಗಳಿಂದ ಯಥೇಚ್ಫವಾಗಿ ಹಣ ತಂದು ವಿಶ್ವವಿದ್ಯಾನಿಲಯದ ಸರ್ವತೋಮುಖ ಬೆಳೆವಣಿಗೆಗೂ ಕಾರಣರಾದರು. ಇವರ ದಕ್ಷ ಆಡಳಿತ ಹಾಗೂ ಇವರ ಕಾಲದಲ್ಲಿ ವಿಶ್ವವಿದ್ಯಾನಿಲಯದ ತೀವ್ರಪ್ರಗತಿಯನ್ನು ಗಮನಿಸಿ ವಿಶ್ವವಿದ್ಯಾನಿಲಯದ ಧನ ಸಹಾಯ ಆಯೋಗದ ಅಧ್ಯಕ್ಷರೂ ಇತರರೂ ಇವರ ಸೇವೆಯನ್ನು ಬಹುವಾಗಿ ್ರಶಂಸಿಸಿದರು. ರಾಜ್ಯ ಸರ್ಕಾರ ಇವರ ನಿಷೆವಿ, ಕಾರ್ಯತತ್ಪರತೆ, ಪ್ರಾಮಾಣಿಕ ದುಡಿಮೆಗಳನ್ನು ಮನಗಂಡು ಎರಡನೆಯ ಅವದಿsಗೆ ಇವರನ್ನು ಮತ್ತೆ ಕುಲಪತಿಯನ್ನಾಗಿ ಆರಿಸಿತು. ಇವರು ಆರು ವರ್ಷಗಳ ಕಾಲ ಕುಲಪತಿ ಹುದ್ದೆಯಲ್ಲಿದ್ದರು.

	ಇವರು ಕುಲಪತಿಗಳಾಗಿದ್ದ ಕಾಲದಲ್ಲಿ ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ಒಂದು ಶೈಕ್ಷಣಿಕ ಕ್ರಾಂತಿಯೇ ಆಯಿತೆನ್ನಬಹುದು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಇಪ್ಪತ್ತನಾಲ್ಕಕ್ಕೂ ಮೀರಿ ಹೊಸ ಸ್ನಾತಕೋತ್ತರ ಪದವಿ ತರಗತಿಗಳು ಆರಂಬಿsಸಲ್ಪಟ್ಟವು. ಅನೇಕ ಡಿಪೆÇ್ಲಮಾ ಹಾಗೂ ಸರ್ಟಿಪಿsಕೇಟ್ ಕೋರ್ಸುಗಳನ್ನು ತೆರೆಯಲಾಯಿತು. ಇವರಿಂದ ಆರಂಬಿsಸಲ್ಪಟ್ಟ ನ್ಯಾಯಶಾಸ್ತ್ರ, ಗೃಹವಿe್ಞÁನ, ಗ್ರಂಥಾಲಯವಿe್ಞÁನ, ಭಾಷಾವಿe್ಞÁನ, ಜಾನಪದ, ದಕ್ಷಿಣ ಭಾರತೀಯ ಅಧ್ಯಯನ, ಮಾನವಶಾಸ್ತ್ರ ಮೊದಲಾದ ಕೆಲವು ಸ್ನಾತಕೋತ್ತರ ತರಗತಿಗಳನ್ನು ಇಲ್ಲಿ ಹೆಸರಿಸಬಹುದು. ಕನ್ನಡ ಅಧ್ಯಯನ ಸಂಸ್ಥೆ, ವಿದೇಶೀ ಭಾಷೆಗಳ ಅಧ್ಯಯನ ಪ್ರಸಂಸ್ಥೆ, ಅಬಿsವೃದ್ಧಿ ಅಧ್ಯಯನ ಸಂಸ್ಥೆ, ಮಿನರಲಾಜಿಕಲ್ ಅಧ್ಯಯನ ಸಂಸ್ಥೆ ಮುಂತಾದ ಸಂಸ್ಥೆಗಳ ಸ್ಥಾಪನೆ ಹಾಗೂ ಬೆಳೆವಣಿಗೆಗಳಲ್ಲಿ ಇವರ ಪಾತ್ರ ಹಿರಿದಾದುದು. ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆ ಇವರ ಕಾಲದಲ್ಲಿ ವ್ಯಾಪಕವಾಗಿ ಬೆಳೆಯಿತು. ಅದೀಗ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವಾಗಿದೆ. ಎಂ.ಎಸ್ಸಿ.ಎಡ್ ಹಾಗೂ ಎಂ.ಪಿsಲ್ ಮುಂತಾದ ಹೊಸ ಶಿಕ್ಷಣ ತರಗತಿಗಳು, ಬಯೋಪಿsಸಿಕ್ಸ್, ಎನ್‍ವಿರಾನ್‍ಮೆಂಟಲ್ ಸ್ಟಡೀಸ್, ಹ್ಯೂಮನ್ ಜಿಯಾಗ್ರಪಿs, ಅಗ್ರಿಕಲ್ಚರಲ್ ಮಾರ್ಕೆಟಿಂಗ್, ಮರೀನ್ ಜಿಯಾಲಜಿ, ಇನ್‍ಫರ್ಮೇಷನ್ ಸೈನ್ಸಸ್, ಭಾಷಾಂತರ, ನಾಟಕಶಾಸ್ತ್ರ ಮುಂತಾದ ಅನೇಕ ಹೊಸ ಹೊಸ ವಿಷಯಗಳ ಸ್ನಾತಕ ಶಿಕ್ಷಣವನ್ನು ಆರಂಬಿsಸಿದ ದೂರದೃಷ್ಟಿ ಇವರದು. ಶಿವಮೊಗ್ಗದ ಬಿ.ಆರ್. ಪ್ರಾಜೆಕ್ಟ್‍ನಲ್ಲಿ ಆರಂಭವಾದ ಸ್ನಾತಕೋತ್ತರ ಕೇಂದ್ರವೂ ಇವರ ಕಾಣಿಕೆ. ಈಗ ಅದು ಕುವೆಂಪು ವಿಶ್ವವಿದ್ಯಾಲಯವಾಗಿದೆ. ಭಾರತೀಯ ಭಾಷಾ ಸಂಸ್ಥಾನ ಹಾಗೂ ಊಟಿಯಲ್ಲಿದ್ದ ಭಾರತೀಯ ಪುರಾತತ್ತ್ವ ಸರ್ವೇಕ್ಷಣಕ್ಕೆ ಸೇರಿದ ಮುಖ್ಯ ಶಾಸನ ತಜ್ಞರ ಕಚೇರಿ ಮೈಸೂರಿಗೆ ಬರಲು ಗೌಡರು ಕಾರಣ. 1969ಕ್ಕೆ ಮುಂಚೆ ಮಾನಸಗಂಗೋತ್ರಿಯ ಪ್ರದೇಶ 350 ಎಕರೆಯಿದ್ದು ಇವರ ಕಾಲದಲ್ಲಿ ಮತ್ತೆ 150 ಎಕರೆಯಷ್ಟು ವಿಸ್ತಾರವಾದ ಪ್ರದೇಶವನ್ನು ವಿಶ್ವವಿದ್ಯಾನಿಲಯ ಪಡೆದುಕೊಂಡಿತು. ಗಂಗೋತ್ರಿಯ ಆವರಣದಲ್ಲಿ ಅನೇಕ ಭವ್ಯ ಕಟ್ಟಡಗಳು ನಿರ್ಮಾಣಗೊಂಡವು. ತೋಟಗಾರಿಕೆ ಇಲಾಖೆ ವ್ಯಾಪಕವಾಗಿ ಬೆಳೆದು ಗಂಗೋತ್ರಿ ತರುರಾಜಿಯಿಂದ ಕಂಗೊಳಿಸುವಂತಾಯಿತು. ಇವರು ಕುಲಪತಿಯಾದ ಮೇಲೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅನೇಕ ಸುಧಾರಣೆಗಳಾದವು. ಅವುಗಳಲ್ಲಿ ಪರೀP್ಷÁ ಸುಧಾರಣೆ ಇವರ ಕ್ರಾಂತಿಕಾರಕ ಹೆಜ್ಜೆಗಳಲ್ಲಿ ಒಂದು.

	ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ದೇಜಗೌ ಕನಸಿನ ಮತ್ತೊಂದು ಕುಡಿ. ತಮ್ಮ ಗುರು ರಾಷ್ಟ್ರಕವಿ ಕುವೆಂಪು ಅವರ ಹೆಸರಿನಲ್ಲಿ ಈ ಸಂಸ್ಥೆಯನ್ನು ಕಟ್ಟಿರುವ ದೇಜಗೌ ಅದನ್ನು ಸಂಸ್ಕøತಿ, ಸಾಹಿತ್ಯ ಹಾಗೂ ಸಾಮಾಜಿಕ ವಿಷಯಗಳಿಗೆ ಸಂಬಂದಿsಸಿದ ಸಂಶೋಧನೆಗಳ ಕೇಂದ್ರವನ್ನಾಗಿ ಬೆಳೆಸುತ್ತಿದ್ದಾರೆ. ಸ್ವಂತ ಮನೆಯನ್ನೇ ಕುವೆಂಪು ಟ್ರಸ್ಟಿಗೆ ಧಾರೆಯೆರೆದಿದ್ದಾರೆ. ಅನೇಕ ಶೈಕ್ಷಣಿಕ ಸಂಸ್ಥೆಗಳನ್ನು ಆರಂಬಿsಸಿ ಆ ಮೂಲಕ ಗ್ರಾಮಾಂತರ ಪ್ರತಿಭೆಯ ವಿಕಾಸಕ್ಕೆ ನೆರವಾಗಿದ್ದಾರೆ. ತಮ್ಮ ಗ್ರಂಥಗಳಿಂದ ಇತರೆ ಬರೆವಣಿಗೆಗಳಿಂದ ಬರುವ ಗೌರವಧನವನ್ನೆಲ್ಲ ಅರ್ಪಿಸಿ ಒಂದು ದತ್ತಿಯನ್ನು ದೇಜಗೌ ಟ್ರಸ್ಟ್ ಎಂಬ ಹೆಸರಿನಲ್ಲಿ ಬೆಳೆಸಿ, ಆ ಮೂಲಕವೂ ಸಂಶೋಧನೆ, ವಿಮರ್ಶೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.

	ದೇಜಗೌ ಕನ್ನಡದ ಗದ್ಯ ಲೇಖಕರಲ್ಲಿ ಅಗ್ರಗಣ್ಯರು. ಕನ್ನಡ ಹಾಗೂ ಇಂಗ್ಲಿಷ್ ಈ ಎರಡು ಭಾಷೆಗಳಲ್ಲೂ ಕೃತಿರಚನೆ ಮಾಡಿರುವ ಇವರು 135ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಹೋರಾಟದ ಬದುಕು (1968, 1987) ಇವರ ಬದುಕಿನ ಪ್ರಾಮಾಣಿಕ ಚಿತ್ರವನ್ನು ನೀಡುವ ಗಮನಾರ್ಹ ಕೃತಿ. ನೆನಪಿನ ಬುತ್ತಿ (1994), ನನ್ನ ಉಪವಾಸದ ಕಥೆ (1994), ಕುಲಪತಿ ದಿನಚರಿ (1973) - ಇವು ಆತ್ಮ ಕಥೆಗಳು. ಇವರು ಅನೇಕ ಭಾಷಾಂತರಗಳನ್ನು ಹೊರ ತಂದಿದ್ದಾರೆ. ಇವರ ಭಾಷಾಂತರ ಕೃತಿಗಳಲ್ಲಿ ಮುಖ್ಯವಾದವು: ನೆನಪು ಕಹಿಯಲ್ಲ (ಕೃಷ್ಣ ಹಲೇಸಿಂಗ್, 1949), ಪುನರುತ್ಥಾನ (ಟಾಲ್‍ಸ್ಟಾಯ್, 1965), ಯುದ್ಧ ಮತ್ತು ಶಾಂತಿ (ಟಾಲ್‍ಸ್ಟಾಯ್, 1989), ಅನ್ನಾ ಕರೆನಿನ (ಟಾಲ್‍ಸ್ಟಾಯ್, 1991), ಹಮ್ಮು-ಬಿಮ್ಮು (ಜೇನ್ ಆಸ್ಟಿನ್, 1961). ಟಾಲ್‍ಸ್ಟಾಯ್ ಅವರ ಎರಡು ನಾಟಕಗಳನ್ನೂ ಇವರು ಕನ್ನಡಕ್ಕೆ ತಂದಿದ್ದಾರೆ. ಪುನರುತ್ಥಾನ ಕೃತಿಯ ಅನುವಾದಕ್ಕೆ ಇವರಿಗೆ ಸೋವಿಯತ್‍ಲ್ಯಾಂಡ್ ನೆಹರುಪ್ರಶಸ್ತಿ ಲಬಿsಸಿದೆ (1967).

	ಇವರು ಸಂಪಾದಿಸಿದ ಪ್ರಮುಖ ಕೃತಿಗಳಿವು: ಕಬ್ಬಿಗರ ಕಾವ (1964), ಗಿರಿಜಾ ಕಲ್ಯಾಣ ಮಹಾಪ್ರಬಂಧಂ (1951), ಚಿಕುಪಾಧ್ಯಾಯನ ರುಕ್ಮಾಂಗದ ಚರಿತ್ರೆ (1982), ಜೈಮಿನಿ ಭಾರತ ಸಂಗ್ರಹ (1959), ಧರ್ಮಾಮೃತ ಸಂಗ್ರಹ (1957), ನಳಚರಿತ್ರೆ (1965). ಆರು ಸಂಪುಟಗಳಲ್ಲಿ ಪ್ರಕಟವಾಗಿರುವ ಕುಲಪತಿಯ ಭಾಷಣಗಳು, ಕುಲಪತಿಯ ಪತ್ರಗಳು - ಮುಂತಾದ ಗ್ರಂಥಗಳು ವಿಚಾರ ಪ್ರಚೋದಕ ಬರೆಹಗಳಿಂದ ಕೂಡಿವೆ. ಸಮಾಜ ಶಿಕ್ಷಣ, ಸಂಸ್ಕøತಿ, ನಾಡು ನುಡಿ ಮುಂತಾದ ಅನೇಕ ಗಹನ ವಿಷಯಗಳ ಮೇಲೆ ದೇಜಗೌ ಹರಿಸಿರುವ ವಿಚಾರಧಾರೆ ಇವರ ಚಿಂತನಶೀಲತೆಗೆ ಸಾಕ್ಷಿಯಾಗಿದೆ. 

ಪ್ರವಾಸ ಸಾಹಿತ್ಯಕ್ಕೆ ದೇಜಗೌ ಅವರ ಕಾಣಿಕೆ ಹಿರಿದಾದುದು. ಇವರ ರಷ್ಯ, ಯುರೋಪ್, ಅಮೆರಿಕ ಹಾಗೂ ಆಪಿs್ರಕ, ಸ್ವಿಡ್ಸರ್‍ಲೆಂಡ್ ಮೊದಲಾದ ದೇಶಗಳ ಪ್ರವಾಸದ ಹಿನ್ನೆಲೆಯಲ್ಲಿ ರಚಿತವಾಗಿರುವ  ವಿದೇಶದಲ್ಲಿ ನಾಲ್ಕು ವಾರ (1970), ಪ್ರವಾಸಿಯ ದಿನಚರಿ (1974), ಆಫ್ರಿಕಯಾತ್ರೆ (1975), ಯೇಸು ವಿಭೀಷಣರ ನಾಡಿನಲ್ಲಿ (1978), ಹಚ್ಚ ಹಸುರಿನ ನಾಡಿನಲ್ಲಿ ಮೊದಲಾದ ಪ್ರವಾಸ ಕಥನಗಳೂ ಕೇವಲ ಪ್ರವಾಸ ನಿರೂಪಣೆಯಾಗಿರದೆ ಅನೇಕ ಶೈಕ್ಷಣಿಕ ಅಂಶಗಳನ್ನೊಳಗೊಂಡಿವೆ. ಜೀವನ ಚರಿತ್ರೆಗಳ ಪ್ರಕಾರಕ್ಕೂ ದೇಜಗೌ ಇವರ ಕಾಣಿಕೆ ಸಂದಿದೆ. ಮೋತಿಲಾಲ್ ನೆಹರು (1961), ರಾಷ್ಟ್ರಕವಿ ಕುವೆಂಪು (1967), ತೀನಂಶ್ರೀ (1970), ಲೋಕನಾಯಕ (1980), ಲೋಕದ ಬೆಳಕು (1983) ಮುಂತಾಗಿ 25ಕ್ಕೂ ಹೆಚ್ಚು ಜೀವನಚರಿತ್ರೆಗಳನ್ನು ಇವರು ಪ್ರಕಟಿಸಿ ಆ ಕ್ಷೇತ್ರದಲ್ಲಿ ಒಂದು ದಾಖಲೆಯನ್ನೇ ಸ್ಥಾಪಿಸಿದ್ದಾರೆ. ಕರ್ನಾಟಕದಲ್ಲಿ ಜಾನಪದ ಅಧ್ಯಯನಕ್ಕೆ ಇವರು ಹೊಸ ದಿಕ್ಕನ್ನು ತೋರಿಸಿದರು. ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅನೇಕ ಕೃತಿಗಳನ್ನು ರಚಿಸಿ ಜಾನಪದದ ಹಿರಿಮೆಯಳನ್ನು ಮೆರೆದಿದ್ದಾರೆ. ಜಾನಪದ ಅಧ್ಯಯನ (1976), ಜಾನಪದ ಸೌಂದರ್ಯ (1977), ಜನಪದ ಗೀತಾಂಜಲಿ (1978), ಜಾನಪದ ವಾಹಿನಿ (1983) - ಇವೇ ಮೊದಲಾದವು ಉಲ್ಲೇಖನೀಯ ಕೃತಿಗಳು. ಫೆÇೀಕ್‍ಲೋರ್ ಸೊಸೈಟಿ ಆಫ್ ಸೌತ್ ಇಂಡಿಯನ್ ಲ್ಯಾಂಗ್ವೆಜಸ್‍ನ ಅಧ್ಯಕ್ಷರಾಗಿಯೂ ಇವರು ಸೇವೆ ಸಲ್ಲಿಸಿದ್ದಾರೆ.

	ಕುವೆಂಪು ಸಾಹಿತ್ಯದ ಅಧ್ಯಯನಕ್ಕೆ ದೇಜಗೌ ಮಹತ್ತರ ಕೊಡುಗೆ ನೀಡಿದ್ದಾರೆ. ಶ್ರೀರಾಮಾಯಣದರ್ಶನಂ ವಚನಚಂದ್ರಿಕೆ (1954), ಆ ಮಹಾಕಾವ್ಯದ ಗದ್ಯರೂಪ. ಕುವೆಂಪು ಸಾಹಿತ್ಯ: ಕೆಲವು ಅಧ್ಯಯನಗಳು ನಾಲ್ಕು ಸಂಪುಟಗಳಲ್ಲಿ ಪ್ರಕಟವಾಗಿದೆ (1954). ಶ್ರೀ ಕುವೆಂಪು ಅವರ ದಾಂಪತ್ಯ ದರ್ಶನದ ನಾಲ್ಕು ಮೆಗಾ ಕವನಗಳು (1986) ಎಂಬ ಕೃತಿ ದೇಜಗೌ ಅವರ ವ್ಯಾಖ್ಯಾನ ಪ್ರತಿಭೆಗೆ ನಿದರ್ಶನ. ಇವಲ್ಲದೆ ಕುವೆಂಪು ಅವರ ದರ್ಶನ ಮತ್ತು ಸಂದೇಶ (1975), ರಾಷ್ಟ್ರಕವಿ ಸಂದರ್ಶನ (1984), ಕುವೆಂಪು ಶೈಲಿ (1991), ಕುವೆಂಪು ವಿಶ್ವಮಾನವ ಸಂದೇಶ (1993), ಕುವೆಂಪು ಅವರ ಕೊನೆ ದಿನಗಳು - ಇವು ಕವಿಯ ಬದುಕು ಮತ್ತು ಸಾಧನೆಯನ್ನು ಕುರಿತ ಕೃತಿಗಳಾಗಿವೆ.

	ಕನ್ನಡದಲ್ಲಿ ಕೆಲವು ವೈಚಾರಿಕ ಕೃತಿಗಳನ್ನು ಇವರು ರಚಿಸಿದ್ದಾರೆ. ಕನ್ನಡಿಗರೇ ಎಚ್ಚರಗೊಳ್ಳಿ (1951), ಕನ್ನಡಕ್ಕಾಗಿ ಕೈ ಎತ್ತು (1981), ಕನ್ನಡಕ್ಕೆ ನಮನ (1985), ರಾಷ್ಟ್ರೀಯ ಮೂಲಭೂತ ಸಮಸ್ಯೆ (1991) - ಇಂಥ ಕೃತಿಗಳು. ಕಡುಗಲಿ ಕುಮಾರರಾಮ (1961) ಇವರು ರಚಿಸಿದ ಐತಿಹಾಸಿಕ ಕಾದಂಬರಿ. ಕಲ್ಚರ್, ಎಜ್ಯುಕೇಷನ್ ಅಂಡ್ ಸೊಸೈಟಿ (1974), ಪೆÇಯೆಮ್ಸ್ ಆಫ್ ಕುವೆಂಪು (1988) - ಇವರು ಇತರರೊಡನೆ ಸೇರಿ ರೂಪಿಸಿದ ಇಂಗ್ಲಿಷ್ ಕೃತಿಗಳು.
	ದೇಜಗೌ ಅವರ ಸಾಹಿತ್ಯಕ ದುಡಿಮೆ ವ್ಯಾಪಕವಾದುದು. ಹಲವು ವರ್ಷ ಇವರು ಪ್ರಬುದ್ಧ ಕರ್ಣಾಟಕದ ಸಂಪಾದಕರಾಗಿದ್ದರು. ಅನೇಕ ಸಂಭಾವನ ಗ್ರಂಥಗಳ ಸಂಪಾದಕರಾಗಿಯೂ ಕೃತಿಗಳನ್ನು ಹೊರತಂದಿದ್ದಾರೆ. ವಯಸ್ಕರ ಶಿಕ್ಷಣ ಸಮಿತಿ, ಬೆಂಗಳೂರಿನ ಕರ್ನಾಟಕ ಸಹಕಾರೀ ಪ್ರಕಾಶನ, e್ಞÁನಗಂಗೋತ್ರಿಯ ಸಂಪುಟಗಳು - ಇಲ್ಲೆಲ್ಲ ಇವರ ಪಾತ್ರ ಇದ್ದೇ ಇದೆ. ಕನ್ನಡದ ಪುರೋಬಿsವೃದ್ಧಿಗಾಗಿ ದೇಜಗೌ ಅವರ ದುಡಿಮೆಯನ್ನು ಮತ್ತು ಇವರ ಅಪಾರ ಸಂಖ್ಯೆಯ ಕೃತಿಗಳನ್ನು ಗಮನಿಸಿ ಬೆಂಗಳೂರಿನಲ್ಲಿ ನಡೆದ 47ನೆಯ ಕನ್ನಡ ಸಾಹಿತ್ಯ ಸಮ್ಮೇಳನದ (1970) ಅಧ್ಯಕ್ಷರನ್ನಾಗಿ ಆರಿಸುವುದರ ಮೂಲಕ ಕನ್ನಡ ಜನತೆ ಇವರಿಗೆ ತನ್ನ ಗೌರವವನ್ನು ಸಲ್ಲಿಸಿತು.

	ಕನ್ನಡ ಸಾಹಿತ್ಯ, ಶಿಕ್ಷಣ, ಸಂಸ್ಕøತಿ ಕ್ಷೇತ್ರಗಳಲ್ಲಿ ಸಲ್ಲಿಸಿದ ಅಪಾರ ಸೇವೆಗಾಗಿ ದೇಜಗೌ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯ   ಗೌರವ ಡಾಕ್ಟೊರೇಟ್ ಪದವಿಯನ್ನು ನೀಡಿ ಗೌರವಿಸಿತು (1975). ಜಾನಪದ ಕ್ಷೇತ್ರಕ್ಕೆ ಇವರು ಸಲ್ಲಿಸಿದ ಅಮೂಲ್ಯ ಸೇವೆಯನ್ನು ಪರಿಗಣಿಸಿ ಇವರನ್ನು ಕರ್ನಾಟಕ ವಿಶ್ವವಿದ್ಯಾಲಯದ ಜಾನಪದ ಸಮ್ಮೇಳನಕ್ಕೆ ಅಧ್ಯಕ್ಷರನ್ನಾಗಿ ಆರಿಸಲಾಯಿತು (1976). ಇವರು ಕುರುಕ್ಷೇತ್ರದಲ್ಲಿ ಜರುಗಿದ ಅಖಿಲ ಭಾರತ ಪ್ರಾಚ್ಯ ವಿದ್ಯಾಲಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು (1974). ಕರ್ನಾಟಕ ವಯಸ್ಕರ ಶಿಕ್ಷಣ ಸಮಿತಿ ಪ್ರಕಟಿಸುತ್ತಿದ್ದ ಪುಸ್ತಕ ಪ್ರಪಂಚ ಮಾಸಪತ್ರಿಕೆಯ ಪ್ರಧಾನ ಸಂಪಾದಕರಾಗಿಯೂ ಇವರು ಸೇವೆ ಸಲ್ಲಿಸಿದ್ದಾರೆ (1977-90).

	ದೇಜಗೌರವರಿಗೆ ಹಲವು ಪ್ರಶಸ್ತಿ — ಗೌರವಗಳು ಸಂದಿವೆ. ತಿರುವಾಂಕೂರಿನ ದ್ರಾವಿಡ ಭಾಷಾವಿe್ಞÁನ ಸಂಸ್ಥೆಯ ಸೀನಿಯರ್ ಫೆಲೋ ಗೌರವ (1979), ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1984), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1985), ಕರ್ನಾಟಕ ಸರ್ಕಾರದ ಪ್ರತಿಷಿವಿತ ಪಂಪ ಪ್ರಶಸ್ತಿ (1998), ಹಂಪಿಯ ಕನ್ನಡ ವಿಶ್ವವಿದ್ಯಾಲಯದ 'ನಾಡೋಜ' ಗೌರವ ಡಿ.ಲಿಟ್. ಪದವಿ ಇವು ಪ್ರಮುಖವಾದವು. ಇವರಿಗೆ ಹಲವು ಅಬಿsನಂದನ ಗ್ರಂಥಗಳು ಅರ್ಪಣೆಯಾಗಿವೆ. ಅವೆಂದರೆ ಅಂತಃಕರಣ, ದೇಜಗೌ ವ್ಯಕ್ತಿ ಮತ್ತು ಸಾಹಿತ್ಯ, ರಸಷಷ್ಠಿ, 70ರ ಹೊಸ್ತಿಲಲ್ಲಿ, ಅಮೃತವರ್ಷ ಮತ್ತು ಅಪೂರ್ವ, ನಮ್ಮ ನಾಡೋಜ. ಇವರ ಸಿದ್ಧಿ ಸಾಧನೆಗಳನ್ನು ಕುರಿತಂತೆಯೂ ಹಲವು ಗ್ರಂಥಗಳು ಪ್ರಕಟವಾಗಿವೆ. ಕನ್ನಡದ ಕಣ್ಮಣಿ, ಕನ್ನಡ ಸೇನಾನಿ, ಕರ್ಮಯೋಗಿ, ಕುಲಪತಿಯ ಸಾಧನೆಗಳು, ಗುಡಿಸಲಿನಿಂದ ಗಂಗೋತ್ರಿಗೆ, ದೇಜಗೌ 75 - ಸಂದರ್ಶನ ಇತ್ಯಾದಿ.

	ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಯಾಗಿ ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದ ದೇಜಗೌ ಮತ್ತೆ ತಮ್ಮ ಮಾತೃ ಸಂಸ್ಥೆಗೆ ಪ್ರಾಧ್ಯಾಪಕರಾಗಿ ಮರಳಿ ದಕ್ಷಿಣ ಭಾರತದಲ್ಲಿಯೇ ಒಂದು ಹೊಸ ಮೇಲ್ಪಂಕ್ತಿಯನ್ನು ಹಾಕಿದರು. ಬೋಧನೆ, ಸಾಹಿತ್ಯ ರಚನೆ, ಅಧ್ಯಯನಗಳಲ್ಲಿ ಅಪಾರ ಸಂತೋಷವನ್ನು ಕಂಡುಕೊಂಡರು. ನಿವೃತಿಯ ಅನುಂತರ ಈಗ ದೇಜಗೌ ಅವರು ತಾವು ಕಟ್ಟಿದ ಶ್ರೀಕುವೆಂಪು ವಿದ್ಯಾವರ್ಧಕ ಟ್ರಸ್ಟಿನ ಸರ್ವತೋಮುಖ ಅಬಿsವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಸಾಹಿತ್ಯ ಸಂಸ್ಕøತಿಗಳ ಸಂವರ್ಧನೆಯಲ್ಲಿ ಈ ಸಂಸ್ಥೆ ಗಣ್ಯ ಪಾತ್ರವನ್ನು ವಹಿಸಬೇಕೆಂಬುದೇ ಇವರ ಹೆಗ್ಗನಸು.

	ಇವರ ಪತ್ನಿ ಸಾವಿತ್ರಮ್ಮ. ಜೆ.ಶಶಿಧರ ಪ್ರಸಾದ್ ಇವರ ಮಗ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಭೌತವಿe್ಞÁನದ ಪ್ರಾಧ್ಯಾಪಕರಾಗಿರುವ ಇವರು ಈಗ ಕುಲಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ (1 ಸೆಪ್ಟಂಬರ್  2003ರಿಂದ). ತಂದೆ ಮತ್ತು ಮಗ ಇಬ್ಬರೂ ಒಂದೇ ವಿಶ್ವವಿದ್ಯಾನಿಲಯದಲ್ಲಿ ಕುಲಪತಿಯಾದದ್ದು ಭಾರತೀಯ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಕ್ಷೇತ್ರದಲ್ಲಿ ಅಪರೂಪದ ಸಂಗತಿಯಾಗಿದೆ.	 (ಜೆ.ಎಸ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ